Wednesday, November 18, 2009

ಪಕ್ಷಿ ಪ್ರೇಮಿ ಸಲೀಂ ಅಲಿ


ಪಕ್ಷಿ ಪ್ರೇಮಿ ಎಂದೇ ವಿಶ್ವವಿಖ್ಯಾತ ಪಕ್ಷಿ ತಜ್ನ ಸಲೀಂ ಮೊಹಿಜ್ಜಿದ್ದಿನ್ ಅಲಿ ೧೯೦೬ ನವ್ಹೆಂಬರ್ ೧೨ ರಂದು ಜನನ ಬಾಲ್ಯದಿಂದಲೇ ಸಲೀಂ ಅಲಿಯವರಿಗೆ ನಿಸರ್ಗದ ನಡುವೆ ಓಡಾಡಿಕೊಂಡಿರುವ ಹಂಬಲ. ಇದೇ ಕಾರಣವೋ ಏನೋ ಅವರು ವಿಶ್ವವಿದ್ಯಾಲಯದ ಯಾವ ಪದವಿಯನ್ನು ತೆಗೆದುಕೊಳ್ಳಲಿಲ್ಲ ಪ್ರಕ್ರತಿಯೇ ಅವರಿಗೆ ಪಾಠಶಾಲೆಯಾಯಿತು.

ಭರ್ಮಾದಲ್ಲಿ ಕೆಲಸದಲ್ಲಿದ್ದ ಸೋದರನಿಗೆ ಸಹಾಯವಾಗಲೆಂದು ಅಲ್ಲಿಗೆ ಹೋದ ಸಲೀಂ ಅಲಿ ಸುತ್ತಾಡಿದ್ದೆಲ್ಲಾಭರ್ಮಾದ ಕಾಡುಗಳಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ ಕೇಳುತ್ತಾ ಅವುಗಳ ಬಣ್ಣ,ಹಾರಾಟ ನೋಡುತ್ತಾ ಸಮಯ

ಭರ್ಮಾದಿಂದ ಹಿಂತಿರುಗಿದ ಬಳಿಕ ಸಲೀಂ ಅಲಿ ಪ್ರಾಣಿಶಾಸ್ತ್ರವನ್ನಬ್ಯಸಿಸಿ ಬಾಂಬೆ ನ್ಯಾಚುರಲ್ ಹಿಸ್ತರಿ ಸೊಸೈಟಿಯಲ್ಲಿ ಗೈಡ್ ಆಗಿ ಕೆಲಸಕ್ಕೆ ಸೇರಿದರು. ಹೆಚ್ಚಿನ ತರಬೇತಿ ಪಡೆಯಲು ಜರ್ಮನಿಗೆ ಹೋಗಿ ಬಂದರು. ಆದರೆ ಭಾರತಕ್ಕೆ ಮರಳಿದಾಗ ಅವರು ಇದ್ದ ಕೆಲಸ ಕೈ ಬಿಟ್ಟು ಹೋಗಿತ್ತು.ಅವರಿಗೆ ಹೆಂಡತಿಯ ಸಂಪಾದನೆಯೇ ಜೀವನಾಧಾರವಾಗಿತ್ತು.

ಮೊದಲಿನಿಂದಲೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದ ಅಲಿಯವರಿಗೆ ಗೀಜಗ್ ಹಕ್ಕಿಯ ಬಗ್ಗೆ ಅದ್ಯಯನ ನಡೆಸಿ ವಿಶ್ವದಾದ್ಯಂತ ಹೆಸರಾದರು. ವಿವಿಧ ಪಕ್ಷಿಗಳ ಕುರಿತು ಪುಸ್ತಕಗಳನ್ನು ಸಲೀಂ ಅಲಿ ರಚಿಸಿದ್ದಾರೆ. ಅವರ ದ ಬುಕ್ ಆಫ್ ಇಂಡಿಯನ್ ಬರ್ಡ್ಸ್ ಒಂದು ವಿಶಿಷ್ಟ ಗ್ರಂಥ ಈ ಪುಸ್ತಕದಲ್ಲಿ ಪಕ್ಷಿಗಳ ವಿವಿಧ ಜಾತಿ ವರ್ಗಗಳನ್ನು ಹೆಸರಿಸಿ ಆ ವರ್ಗದ ಪಕ್ಷಿಗಳ ಚಿತ್ರಗಳನ್ನು ಕೊಟ್ಟಿದ್ದಾರೆ. ಒಬ್ಬ ಸಾಮಾನ್ಯನು ಈ ಚಿತ್ರಗಳನ್ನು ನೋಡಿ ಬಗೆಬಗೆಯ ಪಕ್ಷಿಗಳನ್ನು ಗುರುತಿಸಲು ಸಾದ್ಯ.


೧೯೪೮ ರಲ್ಲಿ ಅಲಿ ಅಂತರಾಷ್ತ್ರೀಯ ಮನ್ನಣೆ ಗಳಿಸಿದ ಮತ್ತೊಬ್ಬ ಪಕ್ಷಿ ವಿಜ್ನಾನಿ ಎಸ್.ದಿಲಾನಿ ರಿಪ್ಲೆಯವರೊಂದಿಗೆ ಸೇರಿಕೊಡು ಹತ್ತು ಸಂಪುಟಗಳಲ್ಲಿ ಹ್ಯಾಂಡ್ ಬುಕ್ ಆಫ್ ದ ಬರ್ಡ್ಸ್ ಆಫ್ ಇಂಡಿಯಾ ಆಂಡ್ ಪಾಕಿಸ್ತಾನ ಎಂಬ ವಿಶಿಷ್ಟ ಗ್ರಂಥವನ್ನು ಹೊರತಂದರು. ಸಲೀಂ ಅಲಿ ತಮ್ಮ ಇಳಿ ವಯಸ್ಸಿನಲ್ಲೆ ಪಕ್ಷಿಗಳಿಗಾಗಿ ಹಂಬಲಿಸುತ್ತಿದ್ದ ಪರಿ ಎಂಥವರನ್ನು ಬೆರಗುಗೊಳಿಸುತ್ತಿತ್ತು. ಅಲಿಯವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದವು.
ಭಾರತ ಸರಕಾರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆರಿಸಿ ಗೌರವಿಸಿತ್ತು ತಾವು ಪಕ್ಷಿಗಳ ಮಡಿಲಿನಲ್ಲಿ ಕಳೆದ ಜೀವನದ ಕಥೆಯನ್ನು ಅಲಿಯವರು ಫಾಲ್ ಆಫ್ ಎ ಸ್ಯಾರೋ ಎಂಬ ರಾಷ್ಟ್ರಕಥೆ ಬರೆದಿದ್ದಾರೆ. ಸಲೀಂ ಅಲಿಯವರು ೧೯೮೭ ಜೂನ್ ೨೦ ರಂದು ಮುಂಬೈಯಲ್ಲಿ ನಿಧನರಾದರು.
ಪಕ್ಷಿಲೋಕದ ಅದ್ಬುತ ಇಂಚರವೊಂದು ಹಾಡಿ ಅಸ್ತಮಿಸಿದಂತಾಯಿತು.

Sunday, November 8, 2009

ವಿಶ್ವದ ಅತ್ಯಂತ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್


ಜಗತ್ತಿನ ಅತ್ಯಂತ ಚಿಕ್ಕ ಪಕ್ಷಿ ಎಂಬ ಹೆಗ್ಗಳಿಕೆ ಹಮ್ಮಿಂಗ್ ಪಕ್ಷಿಯದ್ದು ಗಾತ್ರದಲ್ಲಿ ಅತಿ ಚಿಕ್ಕದಾದರೂ ಇದಕ್ಕೆ ಇದರದೇ ಆದ ಹಲವು ವಿಶೇಷಗಳಿವೆ. ಅಂಗರಚನೆ ಟ್ರೋಕಿಲಿಡಾ ಎಂಬ ಪಕ್ಷಿ ಜಾತಿಗೆ ಸೇರಿರುವ ಇದರ ಗಾತ್ರ ೫-೬ ಇಂಚುಗಳಷ್ಟು ಈ ಪಕ್ಷಿಯನ್ನು ನಾವು ಬರೆಯುವ ಪೆನ್ಸಿಲಿನ ತುದಿಯ ಮೇಲೆ ನಿಲ್ಲಿಸಬಹುದು ಎಂದರೆ ಎಷ್ಟು ಚಿಕ್ಕ ಗಾತ್ರದ ಪಕ್ಷಿಯಾಗಿರಬಹುದು ನೀವೇ ಊಹಿಸಿ ಈ ಪುಟಾಣಿ ಪಕ್ಷಿ ವೇಗ ಇದೆಯಲ್ಲ ಅದು ನಮ್ಮ ಉಹೆಗೂ ನಿಲುಕದು.ಅಷ್ಟೊಂದು ವೇಗದಲ್ಲಿ ಹಾರಾಡುತ್ತದೆ ನೀವು ಒಮ್ಮೆ ಕಣ್ಣು ರೆಪ್ಪೆ ಪಿಳಿಕಿಸುವದರಲ್ಲಿ ಅದು ೨೫ ಬಾರಿ ತನ್ನ ರೆಕ್ಕೆಯನ್ನು ಬಡಿದುಕೊಂಡಿರುತ್ತದೆ .ಪ್ರತಿ ಸೆಕೆಂಡಿಗೆ ೯೦-೧೨೦ ಸಾರಿ ತನ್ನ ರೆಕ್ಕೆಯನ್ನು ಬಡೆದುಕೊಳ್ಳುತ್ತದೆ. ಗಂಟೆಗೆ ಸುಮಾರು ೧೫ ಕಿ.ಮಿ ವೇಗದಲ್ಲಿ ಹಾರಬಲ್ಲದು ಈ ಪಕ್ಷಿ ಸುಮಾರು ೩-೪ ವರ್ಷ ಬದುಕಬಲ್ಲದು ಈ ಪೈಕಿ ಕೆಲವು ೧೦-೧೨ ವರ್ಷ ಬದುಕಿ ದಾಖಲೆ ನಿರ್ಮಿಸಿವೆ ಎನ್ನುತ್ತಾರೆ ಪಕ್ಷಿ ಶಾಸ್ತ್ರಜ್ಞರು


ಸಾಮಾನ್ಯವಾಗಿ ಪೊದೆಗಳಲ್ಲಿ ಗೂಡುಕಟ್ಟುವ ಇದು ಒಮ್ಮೆಗೆ೩-೪ ಮೊಟ್ಟೆಗಳನ್ನು ಇಡುತ್ತದೆ .ಮೂತ್ತೆ ಒಡೆದು ಮರಿಯಗಳು ತೆಗೆದುಕೊಳ್ಳುವ ಸಮಯ ೨೦-೩೦ ದಿನಗಳು ಈ ಪಕ್ಷಿ ನಿಂತಲ್ಲೇ ನೇರವಾಗಿ ಮೇಲಕ್ಕೆ ವೃತ್ತಾಕಾರವಾಗಿ ಹಾರುವ ಸಾಮರ್ಥ್ಯ ಹೊಂದಿದೆ ಪಕ್ಷಿ ಜಗತ್ತಿನ ಅತ್ಯಂತ ಕೌತುಕಮಯವಾದ ಹಮ್ಮಿಂಗ್ ನಲ್ಲಿ ೨೦೦ ಬಗೆಯ ಉಪಪ್ರಬೇದಗಳಿವೆ ಈ ಪಕ್ಷಿಯನ್ನು ಗುರುತಿಸುವದು ಬಲು ಸುಲಭ ಹೆಣ್ಣು ಹಮ್ಮಿಂಗ್ ಕಂದು ಬಣ್ಣದಲ್ಲಿದ್ದು ಮುಖ ಬಿಳಿ ಬಂನದ್ದಿರುತ್ತದೆ


Friday, June 19, 2009

ಬಾಲ್ಯದ ಆ ದಿನಗಳು

ನಾನು ೫ ನೇ ತರಗತಿಯಿಂದ ಇಲ್ಲಿಯವರೆಗೊ ಕಳೆದ ಆ ದಿನಗಳನ್ನು ನೆನಪಿಸಿಕೊಂಡಾಗ ಸ್ವಲ್ಪ ಖುಷಿ ಸ್ವಲ್ಪ ದುಃಖ ಕಾರಣ ಆ ದಿನಗಳು ನನ್ನಲ್ಲಿ ಮರುಕಳಿಸಿದವು ಚಿಕ್ಕವನಿದ್ದಾಗ ಎಲ್ಲರು ಜೊತೆ ಆಡಿದ ಆ ಆಟಗಳು ಮತ್ತು ಅಜ್ಜಿಯ ಹೊಲಕ್ಕೆ ಹೋಗಿ ಕುರಿ ಹೊಡಕೊಂಡು ಅವುಗಳನ್ನು ಮೆಯಿಸುತ್ತಾ ಗುಡ್ಡ ತಿರುಗಾಡಿ ತ್ತೆ ಸಾಯಂಕಾಲದ ಹೊತ್ತಿಗೆ ಹಿಂದುರಿಗಿ ಬರುತ್ತಿದ್ದೆವು ಏನೋ ಕುರಿ ಮೇಯಿಸುವದೆಂದರೆ ಎಲ್ಲಿಲ್ಲದ ಖುಷಿ .



ಹಾಗೆಯೇ ಶಾಲೆ ಪ್ರಾರಂಭವಾಯಿತು ಆಗ ಮಳೆಗಾಲ ಜೋರಾಗಿ ಬಿಸುತ್ತಿದ್ದ ಮಳೆ -ಗಾಳಿಯ ಸಮಯಕ್ಕೆ ಸರಿಯಾಗಿ ಶಾಲೆ ಬಿಟ್ಟ ವೇಳೆ ೫ ಗಂಟೆ ಅಂದು ಶಾಲೆಯಿಂದ ಮಳೆಯಲ್ಲಿ ನೆನೆದುಕೊಂಡು ಓಡೋಡಿ ಬರುವಾಗ ರಸ್ತೆಯಲ್ಲಿ ಮಳೆಯ ರಭಸಕ್ಕೆ ಒಂದು ಸಣ್ಣ ನಿಲಗರಿಯ ಸಸಿ ಬೇರು ಸಹಿತ ಅನಾಥವಾಗಿ ಬಿದ್ದಿತ್ತು ಅದನ್ನು ಕಂಡು ಅಯ್ಯೋ ಜೀವವೇ ಎಂದು ಮನಸ್ಸಿನಲ್ಲೇ ಮರುಗಿದೆ ಅದನ್ನು ಮೇಲೆತ್ತಿಕೊಂಡು ಮನೆಗೆ ತರಬೇಕು ಇನ್ನೇನು ಮನೆ ತಲುಪಿದೆ ಎನ್ನುವ ಸಮಯದಲ್ಲಿ ಅಂಗಳದಲ್ಲಿ ಬಿದ್ದಿದ್ದ ಒಂದು ಮುಳ್ಳು ಕಾಲಿಗೆ ನೆಟ್ಟಾಗ ರಕ್ತ ಸೋರುತ್ತಿತ್ತು ಅದಕ್ಕೆ ಅವ್ವ ಅರಿಸಿಣಪುಡಿ ಹಾಕಿ ಅದಕ್ಕೆ ಅರಿಬೆಯನ್ನು ಕಟ್ಟಿ ರಕ್ತ ನಿಲ್ಲುವ ಹಾಗೆ ಮಾಡಿದಳು ನನಗೆ ಮುಳ್ಳು ಚುಚ್ಚಿದ ನೋವಿಗಿಂತ ನನಗೆ ಸಿಕ್ಕಿರುವ ಆ ಸಸಿಯನ್ನು ಎಲ್ಲಿ ಹಚ್ಚಬೇಕು ಎನ್ನುವ ಚಿಂತೆ ನನ್ನನ್ನು ಕಾಡುತ್ತಿತ್ತು ಅಂತು-ಇಂತು ಮನೆಯ ಹಿತ್ತಲಿನಲ್ಲಿ ಅದನ್ನು ಬೆಳಸಿದೆ ಅದು ಈಗ ಬೆಳೆದು ನನಗಿಂತ ತುಂಬಾ ದೊಡ್ಡದಾಗಿದೆ ನಾನು ಮಾತ್ರ ಹಾಗೆ ಇದ್ದೀನಿ.ಅದನ್ನು ನೋಡಿದಾಗಲ್ಲೆಲ್ಲಾ ಆ ಮಳೆ ಆ ಮುಳ್ಳು ಮತ್ತು ನನ್ನ ಮನಸ್ಸಿನ ಮೇಲೆ ಪ್ರಭಾವ ಬಿರಿದ ಆ ನೀಲಗಿರಿ ಮರದ ಸವಿನೆನಪು ನನ್ನಲ್ಲಿ ಮರುಕಳಿಸುತ್ತದೆ .

Thursday, June 18, 2009

ಡಾ.ಬಿ.ಆರ್ ಅಂಬೇಡ್ಕರ್

ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ ೧೪ ರಂದು ದೇಶಾದ್ಯಂತ ಆಚರಿಸುತ್ತೇವೆ. ಈ ದಿನ ಸರಕಾರಿ ರಜೆಯನ್ನು ಘೋಷಣೆಮಾಡಿದೆ. ಆದರೆ ಈ ದಿನ ರಜೆಯನ್ನು ಕೊಡುವುದನ್ನು ಬಿಟ್ಟು ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವಮಾನದ ಸಾಧನೆಯನ್ನು, ಅವರ ಕೀರ್ತಿಯನ್ನು ಸಾರಿಹೇಳುವುದು ಹಾಗೂ ಅಳವಡಿಸಿಕೊಳ್ಳ್ವುವುದು ಅವಶ್ಯಕವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಳಿಸುವುದು ಅಗತ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡಿದವರು. ಅವರು ಅಲ್ಪಸಂಖ್ಯಾತರ ಏಳಿಗೆಗೆ ಪ್ರಮುಖ ಪತ್ರ ವಹಿಸಿದವರು. ಅಂಬೇಡ್ಕರ್ ಅವರು ಪ್ರಖ್ಯಾತ ಪತ್ರಕರ್ತರಲ್ಲದೇ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ದಿನಾಚರಣೆ ಮಾಡುವುದನ್ನು ಜನಸಾಮಾನ್ಯರಿಗೆ ತಿಳಿಸುವುಸು ಮುಖ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳ್ನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಲಿಸುವುದು. ಅವರ ಜೀವನದ ಕುರಿತಾದ ಪ್ರಬಂಧಗಳ ಸ್ಪರ್ಧೆಯನ್ನು ಏರ್ಪಡಿಸುವುದು ಮತ್ತು ಅವರ ಜೀವನದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವುದು ಅವಶ್ಯಕವಾಗಿದೆ.

Tuesday, June 16, 2009

ಹೆಚ್ಚುತ್ತಿರುವ ಬಾಲಕಾರ್ಮಿಕರ ಸಂಖ್ಯೆ


ಜೂನ್ ೧೨ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಕೂಲಿ ಮಾಡುವದನ್ನು ಬಿಟ್ಟು ಶಾಲೆಗೆ ಕಳುಹಿಸಿ ಎಂಬ ಸರ್ಕಾರದ ಆದೇಶವನ್ನು ಯಾರು ಪಾಲಿಸುತ್ತಿಲ್ಲ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುತ್ತಿದ್ದಾರೆ ಕಾರಣ ಹೆಣ್ಣು ಮಕ್ಕಳು ಕಲಿತಾದರು ಏನು ಮಾಡುವದಿದೆ ಮದುವೆ ಆಗಿ ಗಂಡನ ಮನೆ ಸೇರುತ್ತಾರೆ ಕಲಿಸಿಯಾದರು ಏನು ಮಾಡೋದು ಎಂಬ ಭಾವನೆ ಬಡ ತಂದೆ ತಾಯಿಯರದು .

ಅದೇ ಗಂಡು ಮಗನಿಗೆ ಶಾಲೆ ಕಲಿಸಿದರೆ ಅವನು ಕಲಿತು ನೌಕರಿ ತೆಗೆದುಕೊಂಡರೆ ನಮ್ಮನ್ನು ಸಾಕಬಹುದು ಎಂಬ ತಂದೆ ತಾಯಿಯರ ಆಸೆಯಾಗಿರುತ್ತದೆ .ಇತ್ತಿಚಿನ ದಿನಗಳಲ್ಲಿ ಬಡ ಹೆಣ್ಣುಮಕ್ಕಳು ಅವರಿವರ ಮನೆಯಲ್ಲಿ ಬಟ್ಟೆ ಒಗೆಯುವದು, ಮುಸುರಿ ತಿಕ್ಕುವದು ಹೀಗೆ ಅನೇಕ ತರಹದ ಕೆಲಸಗಳನ್ನು ಮಾಡುತ್ತಿದ್ದಾರೆ ಕೊನೆಗೆ ಗೊಂಡಿ ಕೆಲಸಕ್ಕೂ ಹೋಗುತ್ತಾರೆ.
ಆದರೆ ಹುಡುಗರನ್ನು ಮಾತ್ರ ಶಾಲೆಗೆ ಕಳುಹಿಸುತ್ತಾರೆ ಅದರಲ್ಲೂ ಸ್ವಲ್ಪ ಗಂಡು ಮಕ್ಕಳು ಕೂಡಾ ಹೋಟೆಲ್,ಚಿತ್ರಮಂದಿರ,ಬಟ್ಟೆ ಅಂಗಡಿ ಹೀಗೆ ಅನೇಕ ಕಡೆ ದುಡಿಯುತ್ತಾರೆ ಇದರಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ.ಇದನ್ನು ತಡೆಗಟ್ಟಲು ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಕಲಿತು ಅವರ ಮಕ್ಕಳನ್ನು ಕಲಿಸುತ್ತಾರೆ ಇದರಿಂದ ಬಡತನವನ್ನು ನಿರ್ಮೂಲನೆ ಮತ್ತು ಬಾಲಕಾರ್ಮಿಕರಾಗುವದನ್ನು ತಪ್ಪಿಸಬಹುದು.

Monday, June 15, 2009

ರಕ್ತಧಾನ ಮಹಾಧಾನ


ನೀವು ೧೮ -೬೦ ವರ್ಷದವರೇ,ಆರೋಗ್ಯವಂತರೆ ಹಾಗಿದ್ದರೆ ಬನ್ನಿ ಜೂನ್ ೧೪ ರಂದು ವಿಶ್ವ ರಕ್ತಧಾನ ಶಿಬಿರವನ್ನು ಆಚರಿಸಲಾಗುತ್ತದೆ ನೀವು ರಕ್ತಧಾನ ಮಾಡಿ ದಾನಿಗಳಾಗಿ ನೀವು ರಕ್ತ ನೀಡಬೇಕಾದರೆ ೧೮-೬೦ ವರ್ಷದವರಾಗಿರಬೇಕು,ನಿಮ್ಮ ದೇಹದ ತೂಕ ೪೫ ಕೆ.ಜಿ ಗಿಂತ ಹೆಚ್ಚಿರಬೇಕು ಮತ್ತು ಹಿಮೊಗ್ಲೋಬಿನ್ ಅಂಶ ೧೨.೫ ಗ್ರಾಂ ಗಿಂತ ಹೆಚ್ಚಿರಬೇಕು ಈ ಎಲ್ಲ ಅಂಶಗಳು ನಿಮ್ಮಲ್ಲಿದ್ದರೆ ೩ ತಿಂಗಳಿಗೊಮ್ಮೆ ರಕ್ತಧಾನ ಮಾಡಬಹುದು.
ನೀವು ರಕ್ತಧಾನ ಮಾಡುವದರಿಂದ ನಿಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ.ಆಸ್ಪತ್ರೆಯಲ್ಲಿ ರೋಗಿಗಳು ರಕ್ತದ ಕೊರತೆಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ರಕ್ತದಾನ ಮಾಡುವದರಿಂದ ಅವರಿಗೆ ಜೀವಧಾನ ಮಾಡಿದಂತಾಗುತ್ತದೆ ಇದರಿಂದ ನಿಮಗೆ ಯಾವುದೇ ಸಂದರ್ಬದಲ್ಲಿ ರಕ್ತ ಬೇಕಾದರೆ ತಕ್ಷಣ ದೊರೆಯುತ್ತದೆ .ಹಾಗಿದ್ದರೆ ಬನ್ನಿ ರಕ್ತಧಾನ ಮಾಡೋಣ

Friday, June 12, 2009

ರಾಜುರಿನ ಸುಣ್ಣದ ಬಟ್ಟೆಯವರ ಕಥೆ-ವ್ಯತೆ.

ಗಜೇಂದ್ರಗಡದಿಂದ ಕೇವಲ ೪ ಕೀ.ಮಿ ದೂರವಿರುವ ಪುಟ್ಟ ಗ್ರಾಮ ರಾಜುರು ಇಲ್ಲಿನ ಜನರ ಉದ್ಯೋಗ ಸುಣ್ಣ ತಯಾರು ಮಾಡುವದು ಇವರು ಇದನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇವರು ರಾಜುರಿನಲ್ಲಿ ಸುಣ್ಣ ತಯಾರು ಮಾಡಿ ಸಮೀಪದ ಪಟ್ಟಣವಾದ ಗಜೇಂದ್ರಗಡಕ್ಕೆ ಬಂದು ಮಾರಾಟ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ಇವರು ಸುಣ್ಣವನ್ನು ಸುಟ್ಟ ಕಟ್ಟಿಗೆಯ ಇದ್ದಿಲುಗಳಿಂದ ತಯಾರು ಮಾಡುತ್ತಾರೆ ಇವರು ಸುಣ್ಣ ಮಾರಾಟಕ್ಕೆಂದು ಸಮೀಪದ ಉರುಗಳಿಗೆ ತೆರಳಿದಾಗ ಅವರು ಸುಣ್ಣವನ್ನು ಕೊಟ್ಟು ಅವರಿಂದ ದುಡ್ಡು ಪಡೆಯುವ ಬದಲಾಗಿ ಸುಟ್ಟ ಕಟ್ಟಿಗೆಯ ಇದ್ದಿಲುಗಳನ್ನು ಪಡೆಯುತ್ತಾರೆ ಕಾರಣ ಅವರು ಒಂದು ಪುಟ್ಟಿ ಸುಣ್ಣದ ಇದ್ದಿಲುಗಳನ್ನು ಕೊಂಡರೆ ೪೮ ರೂಪಾಯಿಗಳು. ಅದೇ ಸುಣ್ಣ ನೀಡಿ ದುಡ್ಡಿನ ಬದಲಾಗಿ ಇದ್ದಿಲುಗಳನ್ನು ಪಡೆಯುತ್ತಾರೆ ಇದರಿಂದ ಇವರಿಗೆ ಅಲ್ಪ ಸ್ವಲ್ಪ ಹಣ ಉಳಿಯುತ್ತದೆ ಎಂಬುದು ಇವರ ಅಭಿಪ್ರಾಯ.

ಗಜೇಂದ್ರಗಡ ಪಟ್ಟಣ ಪ್ರದೇಶವಾದ್ದರಿಂದ ಇತ್ತಿಚಿಗೆ ಸುಣ್ಣದ ಮನೆಗಳು ಕಣ್ಮರೆಯಾಗುತ್ತಿವೆ ಇದರಿಂದ ಅವರಿಗೆ ಸುಣ್ಣವನ್ನು ಮಾರಾಟ ಮಾಡುವದು ಕಷ್ಟಕರವಾಗುತ್ತಿದೆ ಅಂತಹದರಲ್ಲಿ ಅಲ್ಲೋಂದಿಷ್ಟು ಇಲ್ಲೋಂದಿಷ್ಟು ಮನೆಗಳು ಸುಣ್ಣವನ್ನು ಮನೆಗೆ ಹಚ್ಚುತ್ತಿದ್ದರು ಹಬ್ಬ-ಹರಿದಿನಗಳಲ್ಲಿ ಮಾತ್ರ ಮನೆಗೆ ಸುಣ್ಣ ಹಚ್ಚಿ ಅಲಂಕಾರ ಮಾಡುವ ಸಂಪ್ರದಾಯವನ್ನು ಕಂಡುಕೋಂಡಿದ್ದಾರೆ ಹಾಗಾದರೆ ರಾಜುರಿನಲ್ಲಿ ಸುಣ್ಣದ ಬಟ್ಟಿಯನ್ನೆ ನಂಬಿ ಜೀವನ ಸಾಗಿಸುತ್ತಿರುವ ಎಷ್ಟೂ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ.