ಜೂನ್ ೧೨ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಕೂಲಿ ಮಾಡುವದನ್ನು ಬಿಟ್ಟು ಶಾಲೆಗೆ ಕಳುಹಿಸಿ ಎಂಬ ಸರ್ಕಾರದ ಆದೇಶವನ್ನು ಯಾರು ಪಾಲಿಸುತ್ತಿಲ್ಲ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುತ್ತಿದ್ದಾರೆ ಕಾರಣ ಹೆಣ್ಣು ಮಕ್ಕಳು ಕಲಿತಾದರು ಏನು ಮಾಡುವದಿದೆ ಮದುವೆ ಆಗಿ ಗಂಡನ ಮನೆ ಸೇರುತ್ತಾರೆ ಕಲಿಸಿಯಾದರು ಏನು ಮಾಡೋದು ಎಂಬ
ಭಾವನೆ ಬಡ ತಂದೆ ತಾಯಿಯರದು .
ಅದೇ ಗಂಡು ಮಗನಿಗೆ ಶಾಲೆ ಕಲಿಸಿದರೆ ಅವನು ಕಲಿತು ನೌಕರಿ ತೆಗೆದುಕೊಂಡರೆ ನಮ್ಮನ್ನು ಸಾಕಬಹುದು ಎಂಬ ತಂದೆ ತಾಯಿಯರ ಆಸೆಯಾಗಿರುತ್ತದೆ .ಇತ್ತಿಚಿನ ದಿನಗಳಲ್ಲಿ ಬಡ ಹೆಣ್ಣುಮಕ್ಕಳು ಅವರಿವರ ಮನೆಯಲ್ಲಿ ಬಟ್ಟೆ ಒಗೆಯುವದು, ಮುಸುರಿ ತಿಕ್ಕುವದು ಹೀಗೆ ಅನೇಕ ತರಹದ ಕೆಲಸಗಳನ್ನು ಮಾಡುತ್ತಿದ್ದಾರೆ ಕೊನೆಗೆ ಗೊಂಡಿ ಕೆಲಸಕ್ಕೂ ಹೋಗುತ್ತಾರೆ.
ಆದರೆ ಹುಡುಗರನ್ನು ಮಾತ್ರ ಶಾಲೆಗೆ ಕಳುಹಿಸುತ್ತಾರೆ ಅದರಲ್ಲೂ ಸ್ವಲ್ಪ ಗಂಡು ಮಕ್ಕಳು ಕೂಡಾ ಹೋಟೆಲ್,ಚಿತ್ರಮಂದಿರ,ಬಟ್ಟೆ ಅಂಗಡಿ ಹೀಗೆ ಅನೇಕ ಕಡೆ ದುಡಿಯುತ್ತಾರೆ ಇದರಿಂದ ಬಾಲಕಾರ್ಮಿಕರ
ಸಂಖ್ಯೆ ಹೆಚ್ಚಾಗಿದೆ.ಇದನ್ನು ತಡೆಗಟ್ಟಲು ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಕಲಿತು ಅವರ ಮಕ್ಕಳನ್ನು ಕಲಿಸುತ್ತಾರೆ ಇದರಿಂದ ಬಡತನವನ್ನು ನಿರ್ಮೂಲನೆ ಮತ್ತು ಬಾಲಕಾರ್ಮಿಕರಾಗುವದನ್ನು ತಪ್ಪಿಸಬಹುದು.

ಅದೇ ಗಂಡು ಮಗನಿಗೆ ಶಾಲೆ ಕಲಿಸಿದರೆ ಅವನು ಕಲಿತು ನೌಕರಿ ತೆಗೆದುಕೊಂಡರೆ ನಮ್ಮನ್ನು ಸಾಕಬಹುದು ಎಂಬ ತಂದೆ ತಾಯಿಯರ ಆಸೆಯಾಗಿರುತ್ತದೆ .ಇತ್ತಿಚಿನ ದಿನಗಳಲ್ಲಿ ಬಡ ಹೆಣ್ಣುಮಕ್ಕಳು ಅವರಿವರ ಮನೆಯಲ್ಲಿ ಬಟ್ಟೆ ಒಗೆಯುವದು, ಮುಸುರಿ ತಿಕ್ಕುವದು ಹೀಗೆ ಅನೇಕ ತರಹದ ಕೆಲಸಗಳನ್ನು ಮಾಡುತ್ತಿದ್ದಾರೆ ಕೊನೆಗೆ ಗೊಂಡಿ ಕೆಲಸಕ್ಕೂ ಹೋಗುತ್ತಾರೆ.
ಆದರೆ ಹುಡುಗರನ್ನು ಮಾತ್ರ ಶಾಲೆಗೆ ಕಳುಹಿಸುತ್ತಾರೆ ಅದರಲ್ಲೂ ಸ್ವಲ್ಪ ಗಂಡು ಮಕ್ಕಳು ಕೂಡಾ ಹೋಟೆಲ್,ಚಿತ್ರಮಂದಿರ,ಬಟ್ಟೆ ಅಂಗಡಿ ಹೀಗೆ ಅನೇಕ ಕಡೆ ದುಡಿಯುತ್ತಾರೆ ಇದರಿಂದ ಬಾಲಕಾರ್ಮಿಕರ

No comments:
Post a Comment