
ಭೂಮಿ ಬೇಸಿಗೆಯ ಬಿಸಿಲಿಗೆ ಕಾದಿದೆ. ಮಳೆಯಿಲ್ಲದೇ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಭೂಮಿಗೆ ಜ್ವರ ಬರುವ ಸ್ಠಿತಿಯಲ್ಲಿದೆ! ಆದರೆ ನಾವು ಮಾತ್ರ ನೀರನ್ನು ಬೇಕಾಬಿಟ್ಟಿ ಬಳಸಿ ನೀರಿನ ಅಮೂಲ್ಯವಾದ ಪಾತ್ರವನ್ನೇ ಬರಿದು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದಿನಬೆಳಗಾದರೆ ಸಾಕು ಗ್ರಾಮಗಳಲ್ಲಿ ನಮ್ಮ ಜನರು ಕುಡಿಯಲು ನೀರಿಲ್ಲದ ಕಾರಣಕ್ಕಾಗಿ 5 ರಿಂದ 10 ಕಿ.ಮೀ. ವರೆಗೆ ಹೋಗಿ ಸೈಕಲ್.ಬಂಡಿ.ಕೊನೆಗೆ ಕಾಲುದಾರಿಯಲ್ಲಿ ನೀರನ್ನು ತರುವಂಥಹದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.
ಗ್ರಾಮಗಳಲ್ಲಿ ಬಾವಿ ಹಳ್ಳ-ಕೊಳ್ಳ,ಕಾಲುವೆ ಹೊಂಡಗಳು ನೀರಿಲ್ಲದೆಯೇ ಒಣಗುತ್ತಿವೆ.ಇನ್ನೊಂದೆಡೆ ಮಳೆಯಿಲ್ಲದೆ ಗಿಡ ಮರಗಳು ಒಣಗುತ್ತಿವೆ. ಕೃಷಿ ಭೂಮಿಯಲ್ಲಿ ನೀರಿಲ್ಲದೇ ವ್ಯವಸಾಯ ಮಾಡಲು ರೈತರಿಗೆ ಅತೀ ಕಷ್ಟದಾಯಕವಾಗಿದೆ. ಇಷ್ಟೆಲ್ಲಾ ಆದರೂ ನೀರನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ.
ಗಜೇಂದ್ರಗಡ ಬೆಟ್ಟದ ಮೇಲೆ ಅನೇಕ ಸಿಹಿನೀರಿನ ಹೊಂಡಗಳಿವೆ. ಅವುಗಳಲ್ಲಿ ಅಕ್ಕ ತಂಗಿ,ಆಕಳ ಮತ್ತು ಮಂಗನ ಹೊಂಡಗಳೆಂದು ಕರೆಯುತ್ತಾರೆ. ಈ ಹೊಂಡಗಳ ನೀರನ್ನು ಇಲ್ಲಿನ ಲಂಬಾಣಿ ಜನಾಂಗದವರು ಸಾರಾಯಿ ತಯಾರಿಸಲು ಉಪಯೋಗಿಸುತ್ತಾರೆ. ಹೊಂಡದ ದಡದ ಮೇಲೆ ಹೆಂಡವನ್ನು ತಯಾರಿಸುತ್ತಿದ್ದಾರೆ.
ಸಾರಾಯಿ ತಯಾರಿಸಿದ ಅಶುದ್ಧ ನೀರು ಮತ್ತು ತಯಾರಿಸಿ ಬಿಟ್ಟುಹೊದ ಬೂದಿ,ಕಟ್ಟಿಗೆ ಪುಡಿ ಕೊಳೆತ ಇನ್ನಿತರ ವಸ್ತುಗಳ ಕಾಲುವೆ ಮುಖಾಂತರ ನೇರವಾಗಿ ಹರಿದು ಹೊಂಡವನ್ನು ಸೇರುವುದರಿಂದ ನೀರು ಪಾಚಿ ಕಟ್ಟಿದಂತೆ ಹಚ್ಚ ಹಸಿರಾಗಿ ಮಾರ್ಪಾಡುತವೆ. ಇದರಿಂದ ನೀರು ವಾಸನೆ ಬರುತ್ತಿರುತ್ತದೆ.ಆದರೆ ಮೂಕ ಪ್ರಾಣಿಗಳು ದಾಹವನ್ನು ತೀರಿಸಿಕೊಳ್ಳಲು ಸಾರಾಯಿ ತ್ಯಾಜ್ಯದಿಂದ ಅಶುದ್ಧಗೊಂಡ ನೀರನ್ನು ಕುಡಿದು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.
ಅದೇ ಮಳೆಗಾಲದಲ್ಲಿ ಹೊಂಡಗಳು ತುಂಬಿ ಜಲಪಾತದಂತೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ರಮಣೀಯ. ಹೊಂಡಗಳ ನೀರು ಮಲಿನವಾಗುವುದು ಹೀಗೇ ಮುಂದುವರೆದರೆ ಈಗ ಪ್ರಾಣಿಗಳಿಗೆ ತಗಲುವ ರೋಗಗಳು ಮುಂದೆ ಮನುಷ್ಯರಿಗೂ ತಗಲುವ ಯಾವ ಸಂದೇಹವಿಲ್ಲ.
ತಿಪ್ಪಣ್ಣ ಅವಧೂತ
ಕ್ಯಾಂಪಸ್ ವಿಶೇಷ
ವಿದ್ಯಾಭಾರತಿ ಪ್ರತಿಷ್ಠಾನದ ಇನ್ ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್ ಆಂಡ್ ರಿಸರ್ಚ (ಐ.ಎಂ.ಸಿ.ಆರ್)
ಪತ್ರಿಕೋದ್ಯಮ ಮಹಾವಿದ್ಯಾಲಯವು ೨೦೦೯-೨೦೧೦ ನೇ ಸಾಲಿನ ಪರಿಚಯ ಪತ್ರ ತಯಾರಿಸಲು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಾಚಾರ್ಯೆರೊಂದಿಗೆ ಛಾಯಾಚಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
೨೦೦೪ ರಿಂದ ಐ.ಎಮ್.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯವು ಭಾವಿಪತ್ರಕರ್ತರನ್ನು ತರಬೇತಿಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಮಹಾವಿದ್ಯಾಲಯ ಪತ್ರಿಕಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ೨೦೦೭ ನೇ ಸಾಲಿನ ’ಚಾಣಕ್ಯ’ ಪ್ರಸಸ್ತಿ ಪಡೆಯುವಲ್ಲಿ ಯಸಸ್ವಿಯಾಗಿದೆ.
ಪ್ರಾಚಾರ್ಯೆ ಡಾ.ನಯನಾ ಗಂಗಾಧರ ಅವರು ವಿಭಾಗಕ್ಕೆ ಬೆನ್ನೆಲುಬಾಗಿದ್ದಾರೆ. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರುಗಳಾದ ವಿನಯಚಂದ್ರ ಮಹೀಂದ್ರಕರ್ ಹಾಗೂ ವಿದ್ಯಾಧಿಕಾರಿ ಪ್ರೊ. ಪಿ.ಎನ್.ಖಟಾವಕರ. ಅವರ ಪ್ರೋತ್ಸಾಹ ಮತ್ತು ಸಹಕಾರದ ಸಮ್ಮಿಲನವು ಪತ್ರಿಕೋದ್ಯಮ ವಿಭಾಗದ ಬೆಳವಣಿಗೆಗೆ ಪೂರಕವಾಗಿದೆ.
ಸಮ್ಯಕ್ ದರ್ಶನ
ಕುಮಾರಿ ಚೇತನಾ ಜೋಶಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ. ಇವರು ಐಬಿಎಂಆರ್ ನಲ್ಲಿ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾರೆ.
೨೦೦೮-೨೦೦೯ ನೇ ಸಾಲಿನ ಮಹಾವಿದ್ಯಾಲಯ ವಿಭಾಗದಲ್ಲಿ ನಡೆದ ಜಮಖಾನದಲ್ಲಿ ಕೊಲ್ಯಾಜ್ ಹಾಗೂ ದೇಶಭಕ್ತಿ ಗೀತೆ ಸ್ಪರ್ದೆಯಲ್ಲಿ ಬಹುಮಾನ ಪಡೆದ ಈಕೆ,ಕಲಿಯಬೇಕೆಂಬ ಆಸಕ್ತಿ, ಸತತ ಪರಿಸ್ರಮವಿದ್ದರೆ ಕಲೆ ಒಲಿಯುತ್ತದೆ ಎನ್ನುತ್ತಾರೆ. ಈ ಬಗ್ಗೆ ಅವರನ್ನು ಮಾತನಾಡಿಸಿದಾಗ.........
ಸಂತೋಷ - ಮಹಾವಿದ್ಯಾಲಯದಲ್ಲಿ ಕೊಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದಾಗ ನಿಮ್ಮ ಅನುಭವ ಹೇಗಿತ್ತು?
ಚೇತನಾ - ಕೊಲ್ಯಾಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕಳೆದ ಮೂರು ವರ್ಷಗಳಿಂದ ಕೊಲ್ಯಾಜ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೆನೆ.
ಸಂತೋಷ - ನಿಮ್ಮ ನೆಚ್ಚಿನ ಹವ್ಯಾಸಗಳೇನು?
ಚೇತನಾ - ಸಂಗೀತ, ಸಾಹಿತ್ಯ ಕಾದಂಬರಿಗಳನ್ನು ಓದುವದು ನನ್ನ ಅಚ್ಚುಮೆಚ್ಚಿನ ಹವ್ಯಾಸಗಳಾಗಿವೆ. ಮೂರು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದ್ದೇನೆ.
ಸಂತೋಷ - ನಿಮ್ಮ ಓದಿನ ನಡುವೆ ಹವ್ಯಾಸಕ್ಕೆ ಹೇಗೆ ಪ್ರಾಮುಖ್ಯತೆ ನೀಡುತ್ತೀರಿ?
ಚೇತನಾ- ಹವ್ಯಾಸಗಳೇನಿದ್ದರೂ ಓದಿನ ನಂತರ. ವಿದ್ಯಾಭ್ಯಾಸಕ್ಕೆ ನನ್ನ ಮೊದಲ ಆಧ್ಯತೆ ನಾನು ಚೆನ್ನಾಗಿ ಓದಿ ಉನ್ನತ ಸ್ಥಾನ ಪಡೆಯಬೇಕಿದೆ.
ಸಂತೋಷ - ನಿಮ್ಮ ಭವಿಷ್ಯದ ಗುರಿಯೇನು?
ಚೇತನಾ - ಸಾಫ್ಟ್ ವೇರ್ ತಂತ್ರಾಂಶ ವಿಭಾಗದಲ್ಲಿ ಉದ್ಯೋಗ ಪಡೆಯುವದು ಹಾಗೂ ಅದರಲ್ಲಿ ಯಶಸ್ಸು ಗಳಿಸುವುದು ನನ್ನ ಆಶೆ. ಅಲ್ಲದೇ ಸಾಹಿತ್ಯ ಕೃಷಿ ಮಾಡುವುದೂ ಸಹ ನನ್ನ ಕನಸಾಗಿದೆ.
ಮೊದಲ ಮತದಾನದ ಅನಿಸಿಕೆ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣೆಗೆ ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಐಬಿಎಮ್ ಆರ್ ನ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅನಿಸಿಕೆ ಹೀಗಿದೆ.
"ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ನನಗೆ ಖುಷಿ ಎನಿಸುತ್ತಿದೆ. ಏಕೆಂದರೆ ನಾಗರಿಕನೆಂದು ಪರಿಗಣಿತವಾಗಿ .ದೇಶದ ಆಡಳಿತ ವ್ಯವಸ್ಥೆಯಲ್ಲಿ ನಾನು ಭಾಗವಹಿಸುತ್ತಿದ್ದೆನೆ" ಎನ್ನುತ್ತಾರೆ ಐ.ಬಿ.ಎಂ.ಆರ್.ನಲ್ಲಿ ಬಿಸಿಎ ದ್ವಿತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅಮಿತ್.
’ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ನನಗೆ ಅಲ್ಪಮಟ್ಟಿಗೆ ಸಂತೋಷವೆನಿಸಿದರೂ ಈ ಬಗ್ಗೆ ಬೇಸರವೆಸಿಸುತ್ತಿದೆ. ಕಾರಣ ರಾಜಕಾರಣಿಗಳಲ್ಲಿ ಎದ್ದು ಕಾಣುವ ಭ್ರಸ್ಟತೆ. ಆದರೂ ಮತ ಚಲಾಯಿಸುವುದು ಹಾಗೂ ಸರಿಯಾದ ಅಭ್ಯರ್ಥಿಗಳನ್ನು ಆರಿಸಿ ತರುವ ಮೂಲಕ ದೇಶ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.ಜನರು ಸರಿಯಾದ ಅಭ್ಯರ್ಥಿಯನ್ನು ಆರಿಸಿ ತರುವ ಮೂಲಕ ದೇಶ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. ಜನರು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಸದೃಢ ಸರಕಾರ ಜಾರಿಗೆ ತರಲು ಸಾಧ್ಯವಿದೆ" ಎನ್ನುತ್ತಾರೆ ವಿದ್ಯಾರ್ಥಿನಿ ಅಪೂರ್ವಾ ಮಳಗಿ.
ಜಾಲ ತಾಣ
www.drishtisrishti.blogspot.com
www.imcrvision.blogspot.com
ಹುಬ್ಬಳ್ಳಿಯ ವಿದ್ಯಾಭಾರತಿ ಪ್ರತಿಷ್ಠಾನದ ಇನ್ ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಆಂಡ್ ರಿಸರ್ಚ, ಪತ್ರಿಕೋದ್ಯಮ ಮಹಾವಿದ್ಯಾಲಯದ ವತಿಯಿಂದ ಪ್ರಾರಂಭಿಸಲಾದ ಸೃಜನಶೀಲ ಬ್ಲಾಗ್ ಇದಾಗಿದೆ.ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ವೈಚಾರಿಕ ಪ್ರಜ್ಣೆಯನ್ನು ವೃದ್ಧಿಸುವುದೇ ಈ ಬ್ಲಾಗನ ಮುಖ್ಯ ಉದ್ದೇಶವಾಗಿದೆ.
ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಬರೆಯುವ ಕನ್ನಡ ಹಾಗೂ ಇಂಗ್ಲೀಷನ್ ಲೇಖನ,ನುಡಿಚಿತ್ರ ಗಳು ಈ ಬ್ಲಾಗ್ ನಲ್ಲಿ ಕಾಣಸಿಗುತ್ತವೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ವೇದಿಕೆಯಾಗಿರುವ ಈ ಬ್ಲಾಗ್ ಅನೇಕ ಉತ್ತಮಾಂಶಗಳನ್ನು ಹೊಂದಿದೆ.
ಪ್ರಪಂಚದ ಯಾವುದೇ ಮೂಲೆಯಿಂದಲಾದರೂ ಈ ಬ್ಲಾಗಿಗೆ ನೀವು ಭೇಟಿ ನೀಡಬಹುದಾಗಿದೆ. ಈಗಾಗಲೇ ೧೭೭ ಓದುಗರು ಈ ಬ್ಲಾಗಿಗೆ ಭೇಟಿ ನೀಡಿದ್ದಾರೆ.ಅಲ್ಲದೇ ಓದುಗರು ಟೀಕೆ ಟಿಪ್ಪಣೆ ಅಭಿಪ್ರಾಯಗಳನ್ನು ಕಳುಹಿಸಬಹುದಾಗಿದೆ. ವಿದ್ಯಾರ್ಥಿಗಳೇ ಬರೆಯುವ ಬರಹಗಳಾಗಿದ್ದರಿಂದ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ, ಒಮ್ಮೆ ಓದಿದ ಪ್ರತಿಕ್ರಿಯೆ ಮಿಂಚಂಚೆ ಸಮೇತ ರವಾನಿಸಿ.