Friday, June 19, 2009

ಬಾಲ್ಯದ ಆ ದಿನಗಳು

ನಾನು ೫ ನೇ ತರಗತಿಯಿಂದ ಇಲ್ಲಿಯವರೆಗೊ ಕಳೆದ ಆ ದಿನಗಳನ್ನು ನೆನಪಿಸಿಕೊಂಡಾಗ ಸ್ವಲ್ಪ ಖುಷಿ ಸ್ವಲ್ಪ ದುಃಖ ಕಾರಣ ಆ ದಿನಗಳು ನನ್ನಲ್ಲಿ ಮರುಕಳಿಸಿದವು ಚಿಕ್ಕವನಿದ್ದಾಗ ಎಲ್ಲರು ಜೊತೆ ಆಡಿದ ಆ ಆಟಗಳು ಮತ್ತು ಅಜ್ಜಿಯ ಹೊಲಕ್ಕೆ ಹೋಗಿ ಕುರಿ ಹೊಡಕೊಂಡು ಅವುಗಳನ್ನು ಮೆಯಿಸುತ್ತಾ ಗುಡ್ಡ ತಿರುಗಾಡಿ ತ್ತೆ ಸಾಯಂಕಾಲದ ಹೊತ್ತಿಗೆ ಹಿಂದುರಿಗಿ ಬರುತ್ತಿದ್ದೆವು ಏನೋ ಕುರಿ ಮೇಯಿಸುವದೆಂದರೆ ಎಲ್ಲಿಲ್ಲದ ಖುಷಿ .



ಹಾಗೆಯೇ ಶಾಲೆ ಪ್ರಾರಂಭವಾಯಿತು ಆಗ ಮಳೆಗಾಲ ಜೋರಾಗಿ ಬಿಸುತ್ತಿದ್ದ ಮಳೆ -ಗಾಳಿಯ ಸಮಯಕ್ಕೆ ಸರಿಯಾಗಿ ಶಾಲೆ ಬಿಟ್ಟ ವೇಳೆ ೫ ಗಂಟೆ ಅಂದು ಶಾಲೆಯಿಂದ ಮಳೆಯಲ್ಲಿ ನೆನೆದುಕೊಂಡು ಓಡೋಡಿ ಬರುವಾಗ ರಸ್ತೆಯಲ್ಲಿ ಮಳೆಯ ರಭಸಕ್ಕೆ ಒಂದು ಸಣ್ಣ ನಿಲಗರಿಯ ಸಸಿ ಬೇರು ಸಹಿತ ಅನಾಥವಾಗಿ ಬಿದ್ದಿತ್ತು ಅದನ್ನು ಕಂಡು ಅಯ್ಯೋ ಜೀವವೇ ಎಂದು ಮನಸ್ಸಿನಲ್ಲೇ ಮರುಗಿದೆ ಅದನ್ನು ಮೇಲೆತ್ತಿಕೊಂಡು ಮನೆಗೆ ತರಬೇಕು ಇನ್ನೇನು ಮನೆ ತಲುಪಿದೆ ಎನ್ನುವ ಸಮಯದಲ್ಲಿ ಅಂಗಳದಲ್ಲಿ ಬಿದ್ದಿದ್ದ ಒಂದು ಮುಳ್ಳು ಕಾಲಿಗೆ ನೆಟ್ಟಾಗ ರಕ್ತ ಸೋರುತ್ತಿತ್ತು ಅದಕ್ಕೆ ಅವ್ವ ಅರಿಸಿಣಪುಡಿ ಹಾಕಿ ಅದಕ್ಕೆ ಅರಿಬೆಯನ್ನು ಕಟ್ಟಿ ರಕ್ತ ನಿಲ್ಲುವ ಹಾಗೆ ಮಾಡಿದಳು ನನಗೆ ಮುಳ್ಳು ಚುಚ್ಚಿದ ನೋವಿಗಿಂತ ನನಗೆ ಸಿಕ್ಕಿರುವ ಆ ಸಸಿಯನ್ನು ಎಲ್ಲಿ ಹಚ್ಚಬೇಕು ಎನ್ನುವ ಚಿಂತೆ ನನ್ನನ್ನು ಕಾಡುತ್ತಿತ್ತು ಅಂತು-ಇಂತು ಮನೆಯ ಹಿತ್ತಲಿನಲ್ಲಿ ಅದನ್ನು ಬೆಳಸಿದೆ ಅದು ಈಗ ಬೆಳೆದು ನನಗಿಂತ ತುಂಬಾ ದೊಡ್ಡದಾಗಿದೆ ನಾನು ಮಾತ್ರ ಹಾಗೆ ಇದ್ದೀನಿ.ಅದನ್ನು ನೋಡಿದಾಗಲ್ಲೆಲ್ಲಾ ಆ ಮಳೆ ಆ ಮುಳ್ಳು ಮತ್ತು ನನ್ನ ಮನಸ್ಸಿನ ಮೇಲೆ ಪ್ರಭಾವ ಬಿರಿದ ಆ ನೀಲಗಿರಿ ಮರದ ಸವಿನೆನಪು ನನ್ನಲ್ಲಿ ಮರುಕಳಿಸುತ್ತದೆ .

Thursday, June 18, 2009

ಡಾ.ಬಿ.ಆರ್ ಅಂಬೇಡ್ಕರ್

ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ ೧೪ ರಂದು ದೇಶಾದ್ಯಂತ ಆಚರಿಸುತ್ತೇವೆ. ಈ ದಿನ ಸರಕಾರಿ ರಜೆಯನ್ನು ಘೋಷಣೆಮಾಡಿದೆ. ಆದರೆ ಈ ದಿನ ರಜೆಯನ್ನು ಕೊಡುವುದನ್ನು ಬಿಟ್ಟು ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವಮಾನದ ಸಾಧನೆಯನ್ನು, ಅವರ ಕೀರ್ತಿಯನ್ನು ಸಾರಿಹೇಳುವುದು ಹಾಗೂ ಅಳವಡಿಸಿಕೊಳ್ಳ್ವುವುದು ಅವಶ್ಯಕವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಳಿಸುವುದು ಅಗತ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡಿದವರು. ಅವರು ಅಲ್ಪಸಂಖ್ಯಾತರ ಏಳಿಗೆಗೆ ಪ್ರಮುಖ ಪತ್ರ ವಹಿಸಿದವರು. ಅಂಬೇಡ್ಕರ್ ಅವರು ಪ್ರಖ್ಯಾತ ಪತ್ರಕರ್ತರಲ್ಲದೇ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ದಿನಾಚರಣೆ ಮಾಡುವುದನ್ನು ಜನಸಾಮಾನ್ಯರಿಗೆ ತಿಳಿಸುವುಸು ಮುಖ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳ್ನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಲಿಸುವುದು. ಅವರ ಜೀವನದ ಕುರಿತಾದ ಪ್ರಬಂಧಗಳ ಸ್ಪರ್ಧೆಯನ್ನು ಏರ್ಪಡಿಸುವುದು ಮತ್ತು ಅವರ ಜೀವನದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವುದು ಅವಶ್ಯಕವಾಗಿದೆ.

Tuesday, June 16, 2009

ಹೆಚ್ಚುತ್ತಿರುವ ಬಾಲಕಾರ್ಮಿಕರ ಸಂಖ್ಯೆ


ಜೂನ್ ೧೨ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಕೂಲಿ ಮಾಡುವದನ್ನು ಬಿಟ್ಟು ಶಾಲೆಗೆ ಕಳುಹಿಸಿ ಎಂಬ ಸರ್ಕಾರದ ಆದೇಶವನ್ನು ಯಾರು ಪಾಲಿಸುತ್ತಿಲ್ಲ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುತ್ತಿದ್ದಾರೆ ಕಾರಣ ಹೆಣ್ಣು ಮಕ್ಕಳು ಕಲಿತಾದರು ಏನು ಮಾಡುವದಿದೆ ಮದುವೆ ಆಗಿ ಗಂಡನ ಮನೆ ಸೇರುತ್ತಾರೆ ಕಲಿಸಿಯಾದರು ಏನು ಮಾಡೋದು ಎಂಬ ಭಾವನೆ ಬಡ ತಂದೆ ತಾಯಿಯರದು .

ಅದೇ ಗಂಡು ಮಗನಿಗೆ ಶಾಲೆ ಕಲಿಸಿದರೆ ಅವನು ಕಲಿತು ನೌಕರಿ ತೆಗೆದುಕೊಂಡರೆ ನಮ್ಮನ್ನು ಸಾಕಬಹುದು ಎಂಬ ತಂದೆ ತಾಯಿಯರ ಆಸೆಯಾಗಿರುತ್ತದೆ .ಇತ್ತಿಚಿನ ದಿನಗಳಲ್ಲಿ ಬಡ ಹೆಣ್ಣುಮಕ್ಕಳು ಅವರಿವರ ಮನೆಯಲ್ಲಿ ಬಟ್ಟೆ ಒಗೆಯುವದು, ಮುಸುರಿ ತಿಕ್ಕುವದು ಹೀಗೆ ಅನೇಕ ತರಹದ ಕೆಲಸಗಳನ್ನು ಮಾಡುತ್ತಿದ್ದಾರೆ ಕೊನೆಗೆ ಗೊಂಡಿ ಕೆಲಸಕ್ಕೂ ಹೋಗುತ್ತಾರೆ.
ಆದರೆ ಹುಡುಗರನ್ನು ಮಾತ್ರ ಶಾಲೆಗೆ ಕಳುಹಿಸುತ್ತಾರೆ ಅದರಲ್ಲೂ ಸ್ವಲ್ಪ ಗಂಡು ಮಕ್ಕಳು ಕೂಡಾ ಹೋಟೆಲ್,ಚಿತ್ರಮಂದಿರ,ಬಟ್ಟೆ ಅಂಗಡಿ ಹೀಗೆ ಅನೇಕ ಕಡೆ ದುಡಿಯುತ್ತಾರೆ ಇದರಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ.ಇದನ್ನು ತಡೆಗಟ್ಟಲು ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಕಲಿತು ಅವರ ಮಕ್ಕಳನ್ನು ಕಲಿಸುತ್ತಾರೆ ಇದರಿಂದ ಬಡತನವನ್ನು ನಿರ್ಮೂಲನೆ ಮತ್ತು ಬಾಲಕಾರ್ಮಿಕರಾಗುವದನ್ನು ತಪ್ಪಿಸಬಹುದು.

Monday, June 15, 2009

ರಕ್ತಧಾನ ಮಹಾಧಾನ


ನೀವು ೧೮ -೬೦ ವರ್ಷದವರೇ,ಆರೋಗ್ಯವಂತರೆ ಹಾಗಿದ್ದರೆ ಬನ್ನಿ ಜೂನ್ ೧೪ ರಂದು ವಿಶ್ವ ರಕ್ತಧಾನ ಶಿಬಿರವನ್ನು ಆಚರಿಸಲಾಗುತ್ತದೆ ನೀವು ರಕ್ತಧಾನ ಮಾಡಿ ದಾನಿಗಳಾಗಿ ನೀವು ರಕ್ತ ನೀಡಬೇಕಾದರೆ ೧೮-೬೦ ವರ್ಷದವರಾಗಿರಬೇಕು,ನಿಮ್ಮ ದೇಹದ ತೂಕ ೪೫ ಕೆ.ಜಿ ಗಿಂತ ಹೆಚ್ಚಿರಬೇಕು ಮತ್ತು ಹಿಮೊಗ್ಲೋಬಿನ್ ಅಂಶ ೧೨.೫ ಗ್ರಾಂ ಗಿಂತ ಹೆಚ್ಚಿರಬೇಕು ಈ ಎಲ್ಲ ಅಂಶಗಳು ನಿಮ್ಮಲ್ಲಿದ್ದರೆ ೩ ತಿಂಗಳಿಗೊಮ್ಮೆ ರಕ್ತಧಾನ ಮಾಡಬಹುದು.
ನೀವು ರಕ್ತಧಾನ ಮಾಡುವದರಿಂದ ನಿಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ.ಆಸ್ಪತ್ರೆಯಲ್ಲಿ ರೋಗಿಗಳು ರಕ್ತದ ಕೊರತೆಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ರಕ್ತದಾನ ಮಾಡುವದರಿಂದ ಅವರಿಗೆ ಜೀವಧಾನ ಮಾಡಿದಂತಾಗುತ್ತದೆ ಇದರಿಂದ ನಿಮಗೆ ಯಾವುದೇ ಸಂದರ್ಬದಲ್ಲಿ ರಕ್ತ ಬೇಕಾದರೆ ತಕ್ಷಣ ದೊರೆಯುತ್ತದೆ .ಹಾಗಿದ್ದರೆ ಬನ್ನಿ ರಕ್ತಧಾನ ಮಾಡೋಣ

Friday, June 12, 2009

ರಾಜುರಿನ ಸುಣ್ಣದ ಬಟ್ಟೆಯವರ ಕಥೆ-ವ್ಯತೆ.

ಗಜೇಂದ್ರಗಡದಿಂದ ಕೇವಲ ೪ ಕೀ.ಮಿ ದೂರವಿರುವ ಪುಟ್ಟ ಗ್ರಾಮ ರಾಜುರು ಇಲ್ಲಿನ ಜನರ ಉದ್ಯೋಗ ಸುಣ್ಣ ತಯಾರು ಮಾಡುವದು ಇವರು ಇದನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇವರು ರಾಜುರಿನಲ್ಲಿ ಸುಣ್ಣ ತಯಾರು ಮಾಡಿ ಸಮೀಪದ ಪಟ್ಟಣವಾದ ಗಜೇಂದ್ರಗಡಕ್ಕೆ ಬಂದು ಮಾರಾಟ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ಇವರು ಸುಣ್ಣವನ್ನು ಸುಟ್ಟ ಕಟ್ಟಿಗೆಯ ಇದ್ದಿಲುಗಳಿಂದ ತಯಾರು ಮಾಡುತ್ತಾರೆ ಇವರು ಸುಣ್ಣ ಮಾರಾಟಕ್ಕೆಂದು ಸಮೀಪದ ಉರುಗಳಿಗೆ ತೆರಳಿದಾಗ ಅವರು ಸುಣ್ಣವನ್ನು ಕೊಟ್ಟು ಅವರಿಂದ ದುಡ್ಡು ಪಡೆಯುವ ಬದಲಾಗಿ ಸುಟ್ಟ ಕಟ್ಟಿಗೆಯ ಇದ್ದಿಲುಗಳನ್ನು ಪಡೆಯುತ್ತಾರೆ ಕಾರಣ ಅವರು ಒಂದು ಪುಟ್ಟಿ ಸುಣ್ಣದ ಇದ್ದಿಲುಗಳನ್ನು ಕೊಂಡರೆ ೪೮ ರೂಪಾಯಿಗಳು. ಅದೇ ಸುಣ್ಣ ನೀಡಿ ದುಡ್ಡಿನ ಬದಲಾಗಿ ಇದ್ದಿಲುಗಳನ್ನು ಪಡೆಯುತ್ತಾರೆ ಇದರಿಂದ ಇವರಿಗೆ ಅಲ್ಪ ಸ್ವಲ್ಪ ಹಣ ಉಳಿಯುತ್ತದೆ ಎಂಬುದು ಇವರ ಅಭಿಪ್ರಾಯ.

ಗಜೇಂದ್ರಗಡ ಪಟ್ಟಣ ಪ್ರದೇಶವಾದ್ದರಿಂದ ಇತ್ತಿಚಿಗೆ ಸುಣ್ಣದ ಮನೆಗಳು ಕಣ್ಮರೆಯಾಗುತ್ತಿವೆ ಇದರಿಂದ ಅವರಿಗೆ ಸುಣ್ಣವನ್ನು ಮಾರಾಟ ಮಾಡುವದು ಕಷ್ಟಕರವಾಗುತ್ತಿದೆ ಅಂತಹದರಲ್ಲಿ ಅಲ್ಲೋಂದಿಷ್ಟು ಇಲ್ಲೋಂದಿಷ್ಟು ಮನೆಗಳು ಸುಣ್ಣವನ್ನು ಮನೆಗೆ ಹಚ್ಚುತ್ತಿದ್ದರು ಹಬ್ಬ-ಹರಿದಿನಗಳಲ್ಲಿ ಮಾತ್ರ ಮನೆಗೆ ಸುಣ್ಣ ಹಚ್ಚಿ ಅಲಂಕಾರ ಮಾಡುವ ಸಂಪ್ರದಾಯವನ್ನು ಕಂಡುಕೋಂಡಿದ್ದಾರೆ ಹಾಗಾದರೆ ರಾಜುರಿನಲ್ಲಿ ಸುಣ್ಣದ ಬಟ್ಟಿಯನ್ನೆ ನಂಬಿ ಜೀವನ ಸಾಗಿಸುತ್ತಿರುವ ಎಷ್ಟೂ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ.

Thursday, June 11, 2009

ನನ್ನ ಸ್ನೇಹ ಮಧುರ


ಮನಸ್ಸು ಬಂಗಾರ.

ಕನಸು ಶ್ರುಂಗಾರ.

ಜೀವನ ಒಂದು ತರಾ .

ಆದರೆ ಪ್ರೀತಿ ಸುಮಧುರಾ.

ಸ್ನೇಹ ಮಧುರಾ

ನೆನಪಿನ ಚಿತ್ತಾರ.

ಕಲ್ಪನೆಯ ಕಣ್ಣಲ್ಲಿ ಕನಸುಗಳ ದನಿಯಲ್ಲಿ

ಸಾಗಲಿ ಬದುಕಿನ ಪಯಣ

ಕನಸುಗಳು ನನಸಾಗಲಿ

ಬದುಕೆಲ್ಲಾ ಬೆಳಕಾಗಿ ಉದಯಿಸಲಿ

ಬಾಳಿನ ಆಶಾ ಕಿರಣ .

Wednesday, June 10, 2009

ಏಳು ಬೆಟ್ಟಗಳ ಸಂಗಮ ಗಜೇಂದ್ರಗಡ ಬೆಟ್ಟ






ಗದಗ ಜಿಲ್ಲೆಯಿಂದ ೫೬ ಕಿ.ಮೀ ದೂರವಿರುವ ಗಜೇಂದ್ರಗಡ ಛತ್ರಪತಿ ಮಹಾರಾಜರು ಆಳಿದ ಇತಿಹಾಸವನ್ನು ಹೊಂದಿದೆ ಇಲ್ಲಿ ಕೋಟೆ ಮತ್ತು ಹೊಂಡಗಳ ನಿರ್ಮಾಣವನ್ನು ಇಂದಿಗೂ ಇಲ್ಲಿ ಕಾಣಸಿಗುತ್ತವೆ.ಇವರು ತಾವು ನೀರು ಕುಡಿಯಲು ಒಂದು ಹೊಂಡವನ್ನು ಉಪಯೋಗಿಸಿದರೆ,ಇನ್ನೊಂದು ಹೊಂಡವನ್ನು ಹಾಲು ಮತ್ತು ಮೊಸರಿಗೆ ಇನ್ನೊಂದು ಹೊಂಡ,ಮತ್ತು ಹಸುಗಳಿಗೆ ನೀರು ಕುಡಿಸಲು ಇನ್ನೊಂದು ಹೊಂಡ ಹೀಗೆ ಅವರ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುತ್ತಿದ್ದರು.
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಆಳ್ವಿಕೆ ನೆಡೆಸುವಾಗ ಶತ್ರುಗಳನ್ನು ಸೆದೆಬಡೆಯಲು ಮದ್ದುಗಳನ್ನು ಬಳಸುತ್ತಿದ್ದರು ಮದ್ದು ಇರಿಸುತ್ತಿದ್ದ ಕೋಣೆ ಇಂದಿಗೂ ಕಾಣಸಿಗುತ್ತದೆ. ಹಾಗೇ ಹಿಂದಿನ ಕಾಲದಲ್ಲಿ ಆನೆ,ಬಸವಣ್ಣನ ಮುರ್ತಿಗಳನ್ನು ಗಚ್ಚಿನಲ್ಲಿ ನಿರ್ಮಾಣ ಮಾಡಿ ಹೊಂಡದ ದಡದ ಮೇಲೆ ಅವುಗಳನ್ನು ನಿರ್ಮಿಸಿದ್ದಾರೆ.




ಮೊದಲಿಗೆ ಬೆಟ್ಟದ ಮೇಲೆ ತೆರಳಲು ರಾಜರು ನಿರ್ಮಿಸಿದ ಮೆಟ್ಟಿಲುಗಳಿಂದ ಮೇಲೆ ಹೋಗಬೇಕಾಗಿತ್ತು ಆದರೆ ಈಗ ಬೆಟ್ಟದ ಮೇಲೆ ೪೮ ಗಾಳಿ ವಿದ್ಯುತ್ ಯಂತ್ರಗಳನ್ನು ನಿರ್ಮಾಣ ಮಾಡಿರುವದರಿಂದ ಯಂತ್ರಗಳನ್ನು ತಂದ ಮಾರ್ಗದಲ್ಲೆ ಈಗ ಬೆಟ್ಟದ ಮೇಲೆ ವಾಹನಗಳ ಮೂಲಕ ತೆರಳುತ್ತಾರೆ.ಬೆಟ್ಟದ ಮೇಲೆ ಹತ್ತಿದ ನಂತರ ತಂಪಾದ ಗಾಳಿಯ ವಾತಾವರಣ ನೋಡಬಹುದಾದ ರಾಜರ ಕಾಲದ ಕೋಟೆ,ಕಲ್ಲಿನ ತೊಟ್ಟಿಲು,ಮದ್ದಿನಕೋಣೆ,ಹೊಂಡಗಳು ಮತ್ತು ಅಕ್ಕ ತಂಗಿ ಕೂಡಿ ಎರಡು ಕಲ್ಲುಗಳ ಮೇಲೆ ಒಂದು ಬೃಹತ್ತಾದ ದೊಡ್ಡ ಕಲ್ಲನ್ನೆ ಎತ್ತಿ ಇಟ್ಟಿದ್ದಾರೆ ಎಂಬ ಪ್ರತೀತಿ ಇದೆ.



ಮಳೆಗಾಲ ಬಂತೆಂದರೆ ಸಾಕು ಬೆಟ್ಟದಿಂದ ದುಮುಕುವ ಜಲಪಾತಗಳನ್ನು ವೀಕ್ಷಿಸಬಹುದು ಬೆಟ್ಟದಿಂದ ನೀರು ರಭಸವಾಗಿ ಹರಿದು ಬರುವದರಿಂದ ಬೆಟ್ಟದ ಕೆಳಗೆ ಮಣ್ಣಿನಿಂದ ಕೂಡಿದ ದಿಬ್ಬಗಳು ಇರುವದರಿಂದ ಆ ನೀರಿನ ರಬಸಕ್ಕೆ ಕಣಿವೆಗಳಾಗಿ ಮಾರ್ಪಟ್ಟಿವೆ ಇಲ್ಲಿ ಸದಾ ನೀರು ಇರುವದರಿಂದ ಹಚ್ಚ ಹಸಿರಾದ ಪ್ರಕೃತಿಯನ್ನು ಕಾಣಬಹುದಾಗಿದೆ.



ಬೆಟ್ಟದ ಮೇಲಿಂದ ಸುತ್ತಲೂ ವಿಕ್ಷಿಸಿದರೆ ಕಾಣುವ ಸುಂದರ ನಯನ ಮನೋಹರವಾದ ಬೆಟ್ಟಗಳ ಸಾಲು ಮತ್ತು ಬೆಟ್ಟದ ಮಡಿಲಿನಲ್ಲಿ ಸುತ್ತಲು ಕಾಣುವ ಹಚ್ಚ ಹಸಿರಾಗಿ ಕಾಣುವ ಪ್ರಕೃತಿ ತಂಪಾದ ಗಾಳಿ ಮತ್ತು ಬೋರ್ಗರೆದು ಹರಿಯುವ ನೀರಿನ ಸಪ್ಪಳ ಎಲ್ಲವನ್ನು ನೋಡಿದರೆ ಒಂದು ಕ್ಷಣ ನಮ್ಮನ್ನೇ ನಾವು ಮರೆತುಬಿಡುತ್ತೇವೆ ಹಾಗಿದ್ದರೆ ನೀವು ಬನ್ನಿ ಪ್ರಕೃತಿಯ ಸೌಂದರ್ಯಕ್ಕೆ ಮೈ ಮರೆಯುವದು ಕಂಡಿತ

Tuesday, June 9, 2009

ಪ್ರೀತಿ v|s ಕುರುಡು ಜಗತ್ತು

ಪ್ರೀತಿ ದೂರಾಯ್ತು ಹೃದಯದಿಂದಲ್ಲ ನೆನಪು ಉಸಿರಾಯ್ತು ಕನಸಿನಂದಲ್ಲ ಜೀವ ಜೀವ ಒಂದೇ ದೇಹದಿ ಬಾಳ ಬದುಕು ಬಾರವಾಗಿದೆ ನಿನ್ನ ಅಗಲಿ ನರಳುತಿದೆ ಗೆಳೆಯ ಈ ಮನ.
ಎಷ್ಟೋ ದಿನ ಸಂತೋಷ ಇನ್ನೇಷ್ಟೂ ದಿನ ಭಯದ ನೆರಳು ಕೆಲವು ದಿನ ಕಳವಳ ಬಹಳ ದಿನ ನೋವು ಜೀವನದುದ್ದಕ್ಕೂನಿನ್ನ ನೆನಪಿನ ಯಾತನೆ ಕೊನೆಯಿಲ್ಲಗೆಳೆಯ ಈ ದೇಹ ಮಣ್ಣಲ್ಲಿ ಮಣ್ಣಾದರು ಸರಿ.

ಜಗತ್ತು ಅರಿಯದೆ ಪ್ರೀತಿ ಮಾಡಿದೆವು ಕನಸು ಕಲ್ಪನೆಗಳು ಗಗನದುದ್ದಕ್ಕೂ ಹೋಗಿ ಆಶಾ ಗೋಪುರವಾದವು ಜೋಡಿ ಮನಸ್ಸುಗಳ ಕಲ್ಪನೆ ಒಂದಾದರೆ ಕುರುಡು ಜಗತ್ತು ಬಗೆಯುವ ದ್ರೋಹ ಇನ್ನೊಂದಾಯಿತು ಗೆಳೆಯ.

ನಿನ್ನ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನನ್ನ ಹೃದಯದಲ್ಲಿ ನಿನ್ನ ಪ್ರೀತಿಯ ಬಿಂಬ ಕೊನೆಗೂ ದೈವ ಬಗೆಯುತೊಂದು ದ್ರೋಹ ನಮ್ಮಿಬ್ಬರ ಪ್ರೀತಿಯ ಸಮಾದಿಯ ಮೇಲೆಆ ವಿಧಿ ತನ್ನ ಸೌಧ ಕಟ್ಟುವ ಬಯಕೆ ಇದೆ
ಇದು ಸರಿಯೆ ಕೊನೆಗೊಂದು ಮಾತು ನಮ್ಮಿಬ್ಬರ ಪ್ರೀತಿಯ ಸೋಲಿಗೆ ಕಾರಣವಾದ ಈ ಕುರುಡು ಜಗತ್ತಿಗೆ ನಮ್ಮಿಬ್ಬರ ದಿಕ್ಕಾರವಿದೆ.ನೆನಪಿಟ್ಟುಕೊಳ್ಳಿ

ಚುರುಮರಿಯಲ್ಲೆ ಚೂರಾದವರು


ಅವರ ಇಡೀ ಬದುಕು ಚುರುಮರಿ ಭಟ್ಟಿಯಲ್ಲೆ ಕಳಿದಿದೆ ಹೊಗೆ ಹಾಗೂ ದೂಳಿನ ಜೊತೆಗೆ ನಿತ್ಯ ಚುರುಮರಿ ಮಾಡುತ್ತಾ ಕಪ್ಪಾಗಿದ್ದಾರೆ ಇದು ಗಜೆಂದ್ರಗಡದಲ್ಲಿ ಚುರುಮರಿ ಭಟ್ಟಿಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿರುವವರ ಪರಿ ಅವರ ಈ ಕೆಲಸ ವಂಶಪರಂಪರಿಯಿಂದ ಬಂದಿದ್ದು ಈಗ ದುಡಿಯುತ್ತಿರುವದು ೪೮ ರ ಆಸುಪಾಸಿನವರು
ಇತ್ತಿಚಿಗೆ ಇವರಿಗೆ ಮಕ್ಕಳನ್ನು ಶಾಲೆಗೆ ಕಳಿಸಬೇಕು ಅವರು ನಮ್ಮಂತಾಗಬಾರದು ಎಂದು ಶಾಲೆಗೆ ಕಳುಹಿಸುತ್ತಿದ್ದಾರೆ.ಆದರೆ ಬಡತನದಿಂದಾಗಿ ಇವರಲ್ಲಿ ಕಲಿತವರು ಕಡಿಮೆ ಕೆಲವರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು ಹೆಚ್ಚಿನ ಜನರು ಈ ಭಟ್ಟಿಗಳ ಮೇಲೆಯೇ ಅವಲಂಬಿತರಾಗಿದ್ದಾರೆ.
ಇವರಿಗೆ ಹಬ್ಬ ಹರಿದಿನಗಳು ಮತ್ತು ಮದುವೆ ಸಿಜನ್ ಬತೆಂದರೆ ಚುರುಮರಿಗೆ ಎಲ್ಲಿಲ್ಲದ ಬೇಡಿಕೆ ಇವರು ಇದೇ ವೇಳೆಯಲ್ಲಿ ಮಾತ್ರ ಸರಿಯಾಗಿ ದುಡಿದು ಸಂಕಷ್ಟದಲ್ಲಿದ್ದಾಗ ಆ ದುಡ್ಡನ್ನು ಉಪಯೋಗಿಸಿಕೊಂಡು ಜೇವನ ಸಾಗಿಸುತ್ತಾರೆ ಇವರಿಗೆ ವಾರದಲ್ಲಿ ೩-೪ ದಿನಗಳು ಮಾತ್ರ ಕೆಲಸ ಮಾಡಿ ಉಳಿದ ದಿನಗಳಲ್ಲಿ ಸುಮ್ಮನೆ ಕಾಲ ಕಳೆಯುತ್ತಾರೆ ಬೇರೆ ಕಡೆ ಕೆಲಸ ಮಾಡಬೇಕೆಂದರೆ ಇವರಿಗೆ ಬೇರೆ ಉದ್ಯೋಗದ ಬಗ್ಗೆ ಅರಿವಿಲ್ಲ ಇವರು ಚುರುಮರಿ ಮಾಡುವದರಲ್ಲೆ ಮಾರು ಹೋಗಿದ್ದಾರೆ.
ಇವರಿಗೆ ಒಂದು ದಿನ ಕೆಲಸ ಮಾಡಿದರೆ ಸಿಗುವದು ಬರಿ ೫೦-೬೦ ರೂಪಾಯಿಗಳು ಮಾತ್ರ ಎಂದು ಗೋಳಾಡುತ್ತಾರೆ ಮುಂಜಾನೆ ೪ಘಂಟೆಯಿಂದ ಸಂಜೆ ೬ ರವರೆಗೆ ದುಡಿಯುತ್ತಾರೆ ಗಿರಿಣಿಗೆ ಒಯ್ದು ಅಕ್ಕಿ ಮಾಡಿಸಿದ ಮೇಲೆ ಅವುಗಳನ್ನು ಬಿಸಿಲಲ್ಲಿ ಒಣಗಿಸುತ್ತಾರೆ.ಕರೆಂಟ್ ಸೌಲಬ್ಯ ಸರಿಯಾಗಿದ್ದರೆ ದಿನಕ್ಕೆ ೨ ಕ್ವಿಂಟಲ್ ಭತ್ತದಿಂದ ಚುರುಮರಿ ತಯಾರಿಸುತ್ತಾರೆ ೧ ಕ್ವಿಂಟಲ್ ಭತ್ತದಿಂದ ೮-೯ ಚೀಲ ಚುರುಮರಿ ಸಿದ್ದಗೊಳಿಸುತ್ತಾರೆ.
ಒಂದು ಕ್ವಿಂಟಲ್ ಅವಲಕ್ಕಿಗೆ ೧೪೦೦ ಕೊಟ್ಟು ತಂದರೆ ಒಂದು ಚೀಲ ಚುರುಮರಿಗೆ ೨೨೫ ದರದಂತೆ ಮಾರುತ್ತಾರೆ ಒಂದು ಬಟ್ಟಿಯಲ್ಲಿ ೪-೬ ಜನರು ದುಡಿಯುತ್ತಾರೆ ಆದರೆ ದಿನದ ಕೂಲಿ ೭೦ರೂ ಹೆಚ್ಚಿಗೆ ಪಡೆಯಲು ಸಾದ್ಯವಾಗುತ್ತಿಲ್ಲ ಎನ್ನುತ್ತಾರೆ ಗಿರಣಿ ಮಾಲಿಕರಾದ ಪರಮೇಶಪ್ಪ ಚನ್ನಿಯವರು.

Friday, June 5, 2009

ಬೀದಿಯಲ್ಲೆ ಬೆಳೆವ ಬಾಲ್ಯ

ಓದುವ ಬಾಲ್ಯದಲ್ಲಿ ದಿಕ್ಕೆಟ್ಟು ಓಡುತ್ತಿರುವ ಈ ಮಕ್ಕಳು ಹುಬ್ಬಳ್ಳಿಯವರು ಕೂತುಂಡರೆ ಕೂಳು ಹಾಕುವವರಾರು? ಎಂದು ಹೆತ್ತ ತಾಯಂದಿರೆ ಇಲ್ಲಿ ತಮ್ಮ ಮಕ್ಕಳನ್ನು ಬಿಕ್ಷಾಟನೆಗೆ ಹಚ್ಚಿದ್ದಾರೆ
ಪುಸ್ತಕ ಹಿಡಿದುಕೊಂಡು ಶಾಲೆಗೆ ಹೋಗುವ ಮಕ್ಕಳ ಕೈಯಲ್ಲಿ ಬಿಕ್ಷೆ ಬೇಡುವ ಜೋಳಿಗೆಗಳು ದಿನ ಬೆಳಗಾದ್ರೆ ಸಾಕು ಕೊರೆಯುವ ಚಳಿಯಲ್ಲೂ ಅವರು ಆರೆಂದ್ರೆ ಆರು ಗಂಟೆಗೆ ಎದ್ದು ಚೀಲ ಹಿಡಿದು ಪರೇಡ ಹೊರಡುತ್ತಾರೆ ಎಲ್ಲರೂ ಸೇರಿಕೂಂಡು ಹೊರಟರು ಸ್ವಲ್ಪ ಸಮಯದಲ್ಲೆ ಅವರೆಲ್ಲರು ಮಿಂಚಿನಂತೆ ಮಾಯವಾಗುತ್ತಾರೆ.
ಬಸ್ ನಿಲ್ದಾಣ, ರೈಲು ನಿಲ್ದಾಣ,ಸಿನಿಮಾ,ಪಾರ್ಕ್,ಹೋಟೆಲ್ ಹೀಗೆ ಎಲ್ಲೆಂದರಲ್ಲಿ ಗಸ್ತು ತಿರುಗುವ ಈ ಮಕ್ಕಳು ಅಮ್ಮಾ ಎಂದು ಬಿಕ್ಷೆ ಬೇಡುತ್ತಿರುವಾಗ ಅವಳ ತಾಯಿ ಇನ್ನಾವುದು ಸ್ಟಳದಲ್ಲಿ ಅಮ್ಮಾ ಎಂದು ಬಿಕ್ಷೆ ಬೇಡುತ್ತಿರುತ್ತಾಳೆ.ಈ ಮಕ್ಕಳನ್ನು ನೋಡಿ ನೀವು ಚಿಲ್ಲರೆ ಕಾಸು ಹಾಕಿದರೆ ಸರಿ ಇಲ್ಲವಾದರೆ ಅವರು ನಿಮ್ಮ ಕಾಲನ್ನೆ ಹಿಡಿದುಕೂಳ್ಳುತ್ತಾರೆ ಬಿಡುವದೇ ಇಲ್ಲ.
ಅಷ್ಟಕ್ಕೂ ಈ ಮಕ್ಕಳಿಗೆ ಈ ಕಸಬು ಅನಿವಾರ್ಯವೆ ಎಂದು ಯೋಚಿಸಿದಾಗ ಹೌದು ಅನಿವಾರ್ಯ ಇದಕ್ಕೆ ಕಾರಣ ಬಡತನ ಒಪ್ಪತ್ತಿನ ಅನ್ನಕ್ಕಾಗಿ ಯಾರಾರಿಗೊ ಅಮ್ಮಾ,ತಾಯಿ ಎಂದು ಕೂಗಿದರು ಇವರ ಕೂಗನ್ನು ಕೇಳಿ ಎಷ್ಟು ಜನ ತಾನೆ ಭೀಕ್ಷೆ ನಿಡ್ಯಾರು ಅವ್ರಿಗೆ ಗೊತ್ತು .
ಒಂದು ದಿನ ನಾನು ಫ್ಲ್ಯೆಓವರನಲ್ಲಿ ಹೊಗುವಾಗ ಒಂದು ಹುಡುಗ ಒಬ್ಬ ತಾಯಿಗೆ ಅಮ್ಮಾ ಎಂದು ಭಿಕ್ಷೆ ಕೇಳಿದ ಅದಕ್ಕೆ ಆ ತಾಯಿ ಅವನಿಗೆ ದಿನ ಬೆಳಗಾದರೆ ಏನ್ ಕಾಟನಪ್ಪ ನಿಮದು ಎಂದು ಹೊರಟುಹೊದಳು ನನಗೆ ಅಯ್ಯೋ ಪಾಪ ಅನಿಸಿತು ಆದರೆ ಆ ಹುಡಗನಿಗೆ ಅವನ ಜೀವನದಲ್ಲಿ ಇಂತಹ ಘಟನೆಗಳು ದಿನಬೆಳಗಾದರೆ ಎಷ್ಟು ನಡೆಯುತ್ತವೆಯೋ ಏನೋ ಯಾರು ಬಲ್ಲರು
ಈ ಮಕ್ಕಳ್ಳನ್ನು ಶಾಲೆಗೆ ಕಳುಹಿಸಿದರೆ ಮದ್ಯಾಹ್ನದ ಬಿಸಿಉಟ ಶಾಲೆಯಲ್ಲಿಯೇ ಆಗುತ್ತದೆ ನಿಜ ಆದರೆ ಮನೆಯವರ ಪರಸ್ಠಿತಿ? ಮಕ್ಕಳ ಮುಖ ನೋಡಿ ಯಾರಾದರು ಬಿಕ್ಷೆ ನಿಡುತ್ತಾರೆ ಅವರೇ ಶಾಲೆಗೆ ಹೋದರೆ ಮನೆಗೆ ತಂದು ಹಾಕುವರಾರು ಅದಕ್ಕೆಂದೆ ಅವರು ೬-೭ ಮಕ್ಕಳನ್ನು ಹೆರುತ್ತಾರೆ ಆದರೆ ಇಂತಹ ಮಕ್ಕಳನ್ನು ನೋಡಿ ಕೆಲವರು ಶಾಲೆಗೆ ಯಾಕೆ ಹೊಗಲ್ಲ ಎಂದು ಕೇಳಿದರೆ ಸಾಕು ಇವರ ಓಟ ಶುರುವಾಗುತ್ತೆ. ಅವರು ಯಾರ ಕೈಗೂ ಸಿಗುವದಿಲ್ಲ ಅಷ್ಟೊಂದು ಓಡುತ್ತಾರೆ ಹಾಗಾದರೆ ಇವರ ಮುಂದಿನ ಗತಿ ಏನು?